ಕಲಬುರಗಿ: ನಗರದಲ್ಲಿ ಮಗನನ್ನೆ ಕೊಲೆ ಮಾಡಿದ ತಂದೆಗೆ ಜೀವವಾಧಿ ಶಿಕ್ಷೆ ಮತ್ತು ₹10 ಸಾವಿರ ರೂ ದಂಡ ವಿಧಿಸಿದ ನ್ಯಾಯಾಲಯ
ಕಲಬುರಗಿ : 2024 ರ ಮೇ 31 ರಂದು ತಾಜ್ ನಗರದಲ್ಲಿ ತಂದೆಯಿಂದಲೇ ಮಗನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಮಹ್ಮದ್ ಯೂಸುಫ್ಗೆ 3 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವವಾಧಿ ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.. ಅಕ್ಟೋಬರ್ 29 ರಂದು ಸಂಜೆ 6.30 ಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ.. ಆರೋಪಿ ಮಹ್ಮದ್ ಯೂಸುಫ್ ದಿನಾಲು ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡಿ ಹಲ್ಲೆ ಮಾಡ್ತಿದ್ದ. ಇದನ್ನ ಪ್ರಶ್ನಿಸಿದ ಮಗ ಅಸರಾರ ಅಹ್ಮದ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದನು.. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಚೌಕ್ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು