ಬೆಂಗಳೂರು ಉತ್ತರ: ಪ್ರಜಾಪ್ರಭುತ್ವ ದಿನದ ಅಂಗವಾಗಿ ಯೆಜ್ಡಿ ಬೈಕ್ ಏರಿ ರೈಡ್ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್
ಸೆಪ್ಟೆಂಬರ್ ೧೫ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಈ ವಿಶೇಷ ದಿನದ ನಿಮಿತ್ತ, ಸೋಮವಾರ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಸಿಲಿಕಾನ್ ಸಿಟಿಯಲ್ಲಿ ಜಾಲಿ ಬೈಕ್ ರೈಡ್ ಮಾಡಿದರು. ನೂರಾರು ಮಂದಿ ಬೈಕರ್ಗಳ ಜೊತೆಗೆ ಹಳೇ ಯೆಜ್ಡಿ ಬೈಕ್ನಲ್ಲಿ ಸಿಟಿ ರೌಂಡ್ಸ್ ಹೊಡೆದರು. ಬೆಂಗಳೂರಿನ ಕಂಠೀರವ ಸ್ಟುಡಿಯೋದಿಂದ ವಿಧಾನಸೌಧದ ವರೆಗೆ ಬೈಕ್ ರೈಡ್ ಮಾಡಿ ಸಂಭ್ರಮಿಸಿದರು. ಇವರಿಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸವಾರರು ಸಾಥ್ ನೀಡಿದರು.