ಚಿತ್ತಾಪುರ: ನಾಳೆ ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ: ಪಟ್ಟಣದಲ್ಲಿ ಹಾಕಲಾಗಿದ್ದ ಕೇಸರಿ ಧ್ವಜ, ಬ್ಯಾನರ್ ತೆರವು ಮಾಡಿದ ಪುರಸಭೆ
ಕಲಬುರಗಿ : ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ನಾಳೆ ಆರ್ಎಸ್ಎಸ್ನಿಂದ ಬೃಹತ್ ಪಥಸಂಚಲನ ಜರುಗಲಿದ್ದು, ಪಥಸಂಚಲನ ಅಂಗವಾಗಿ ಪಟ್ಟಣದಲ್ಲಿ ಅಳವಡಿಸಿದ್ದ ಭಗವಾ ಧ್ವಜ ಮತ್ತು ಸ್ವಾಗತ ಬ್ಯಾನರಗಳನ್ನ ಪುರಸಭೆ ಅಧಿಕಾರಿಗಳು ತೆರವು ಮಾಡಿದ ಘಟನೆ ನಡೆದಿದ್ದು, ಅಕ್ಟೋಬರ್ 18 ರಂದು ಬೆಳಗ್ಗೆ 7.30 ಕ್ಕೆ ಮಾಹಿತಿ ಲಭ್ಯವಾಗಿದೆ.. ಪರವಾನಿಗೆ ಇಲ್ಲದೇ ಪಟ್ಟಣದಲ್ಲಿ ಕೇಸರಿ, ಭಗವಾ ಧ್ವಜ ಮತ್ತು ಸ್ವಾಗತ ಬ್ಯಾನರಗಳನ್ನ ಅಳವಿಡಿಸಿದ್ದಕ್ಕೆ ಪುರಸಭೆ ಅಧಿಕಾರಿಗಳು ತೆರವು ಮಾಡಿದ್ದು, ಪುರಸಭೆ ಅಧಿಕಾರಿಗಳ ಕ್ರಮಕ್ಕೆ ಆರ್ಎಸ್ಎಸ್ ಮತ್ತು ಬಿಜೆಪಿ ಕೆರಳಿಕೆಂಡವಾಗಿವೆ..