ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ತಾಲ್ಲೂಕಿನ ಹಲವಾರು ಕಡೆಗಳಲ್ಲಿ ತೆನೆ ಕಟ್ಟಿ ನಿಂತ ಭತ್ತದ ಬೆಳೆ ನೆಲಕ್ಕುರುಳಿ ಬಿದ್ದಿದೆ. ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಹಲವು ಕಡೆ ಒಂದು ತಿಂಗಳಿನಿಂದ ವೈರಸ್ ರೋಗ ಬಂದು ಕಾಳು ಕಟ್ಟುವ ಹಂತದಲ್ಲಿದ್ದ ಭತ್ತ ಇದೀಗ ಮಳೆ-ಗಾಳಿಯಿಂದ ನೆಲಕ್ಕುರುಳಿ ಬಿದ್ದು ಅಪಾರ ನಷ್ಟವಾಗಿದೆ. ನಿರಂತರ ಮಳೆಯಿಂದಾಗಿ ಭತ್ತದ ಪೈರು ನೆಲ ಕ್ಕುಡುಳಿದ್ದಿ ಮಳೆ ಹೀಗೆ ಮುಂದುವರೆದರೆ ಭತ್ತದ ಕಾಳಿನಲ್ಲಿ ಮತ್ತೆ ಮೊಳಕೆ ಒಡೆಯುವ ಆತಂಕ ರೈತರಿಗೆ ಎದುರಾಗಿದೆ.