ಯಳಂದೂರು: ಗಬ್ಬೆದ್ದು ನಾರುತ್ತಿದೆ ಪಟ್ಟಣದ ಬಸ್ ನಿಲ್ದಾಣ, ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣಿಕರ ಆಕ್ರೋಶ
ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದಲ್ಲಿರುವ ಬಸ್ ನಿಲ್ದಾಣದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿಗಳನ್ನು ಕಸವನ್ನು ವಿಲೇವಾರಿ ಮಾಡದೆ ಗಬ್ಬೇದ್ದು ನಾರುತ್ತಿದೆ. ದಿನನಿತ್ಯ ಸಾವಿರಾರು ಪ್ರಯಾಣಿಕರು. ಬರುವ ಓಡಾಟ ಮಾಡುವ ಪ್ರಯಾಣಿಕರು ಕೊಳಚೆ ಪ್ರದೇಶದಲ್ಲಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕುಳಿತುಕೊಳ್ಳವ ಆಸನಗಳ ಹಿಂಭಾಗ ರಾಶಿಗಟ್ಟಲೆ ಕಸ. ಕೊಳಚೆ ನೀರು ಸಂಗ್ರಹಣೆ . ವಿಧಿ ಇಲ್ಲದೆ ಅಲ್ಲೇ ಪ್ರಯಾಣಿಕರು ಕುಳಿತುಕೊಳ್ಳಬೇಕು ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುವುದಿಲ್ಲ ಏಕೆ ಎಂದು ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ.