ದೇವನಹಳ್ಳಿ: ಪಟ್ಟಣದಲ್ಲಿ ಉತ್ತಮ ಆರೋಗ್ಯಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳಿಂದ 10ಕೆ. ಮ್ಯಾರಥಾನ್ ಆಯೋಜನೆ
ದೇವನಹಳ್ಳಿ ಮ್ಯಾರಥಾನ್ ಓಟ :ಎವಿಬಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರುವ ಆಕಾಶ್ ಗ್ರೂಪ್ ಆಫ್ ಇನ್ಸಿಸ್ಟೂಷನ್ ವತಿಯಿಂದ ಆರೋಗ್ಯಕ್ಕಾಗಿ ಹತ್ತು ಕಿಲೋ ಮೀಟರ್ ನ ಮ್ಯಾರಾಥಾನ್ ಓಟ ಆಯೋಜನೆ ಮಾಡಲಾಗಿತ್ತು ಕಾರ್ಯಕ್ರಮಕ್ಕೆ ಆಕಾಶ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಮುನಿರಾಜು ಅವರು ಚಾಲನೆ ನೀಡಿದ್ರು. ಮ್ಯಾರಾಥಾನ್ ಓಟದಲ್ಲಿ ವಿದ್ಯಾರ್ಥಿಗಳು, ಶಿಕ್ಷಣ ಸಿಬ್ಬಂದಿ ಮತ್ತು ಶಿಕ್ಷಣೇತರ ಸಿಬ್ಬಂದಿ ಭಾಗವಹಿಸಿದ್ರು. ಕಾಲೇಜು ವಿದ್ಯಾರ್ಥಿಗಳು ಮ್ಯಾರಾಥಾನ್ ನಲ್ಲಿ ಪಾಲ್ಗೊಂಡಿರುವುದು ಖುಷಿ ಆಗಿದೆ. ದೈಹಿಕವಾಗಿ ಸಧೃಢವಾಗಿರಲು ಇಂತಹ ಕಾರ್ಯಕ್ರಮಗಳು ಸಹಾಯ ಮಾಡುತ್ತದೆ ಎಂದು ತಿಳಿಸಿದ್ರು.