ಕಡಬ: ಮೊದಲ ಬಾರಿಗೆ ಕಡಬದಲ್ಲಿ ಪಟ್ಟಣ ಪಂಚಾಯತ್ ಗೆ ಚುನಾವಣೆ; ಮತದಾನ ಚುರುಕು
ಇದೇ ಮೊದಲ ಬಾರಿಗೆ ಕಡಬ ಪಟ್ಟಣ ಪಂಚಾಯತ್ ಗೆ ಚುನಾವಣೆಯು ನಡೆಯುತ್ತಿದ್ದು, ಬೆಳಗ್ಗೆ 7ರಿಂದ ಮತದಾನ ನಡೆಯುತ್ತಿದೆ. ಕಡಬ ಪಟ್ಟಣ ಪಂಚಾಯತ್ ನಲ್ಲಿ 13 ವಾರ್ಡ್ ಗಳಿದ್ದು, ಚುನಾವಣಾ ಕಣದಲ್ಲಿ ಒಟ್ಟು 32 ಅಭ್ಯರ್ಥಿಗಳಿದ್ದಾರೆ. ಒಟ್ಟು 8,334 ಅರ್ಹ ಮತದಾರರಿದ್ದು, ಈ ಪೈಕಿ 4,018 ಪುರುಷ ಹಾಗೂ 4,316 ಮಹಿಳಾ ಮತದಾರರಾಗಿದ್ದಾರೆ.