ಹಾವೇರಿ: ದೇವರಗುಡ್ಡ ಮಾಲತೇಶ ದೇವರ ಕಾರ್ಣೀಕ: ಕೆಂಪುಕೋಟಿಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್!
Haveri, Haveri | Oct 20, 2026 ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಮಾಲತೇಶ ದೇವರ ಕಾರ್ಣೀಕೋತ್ಸವ ಜರುಗಿದೆ. ನಾಗಪ್ಪ ಅಜ್ಜ ಉರ್ಮಿ ಅವರು 15 ಅಡಿ ಎತ್ತರದ ಬಿಲ್ಲೇರಿ 'ಕೆಂಪುಕೋಟಿಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್' ಎಂದು ದೈವವಾಣಿ ನುಡಿದಿದ್ದಾರೆ. 9 ದಿನಗಳ ಉಪವಾಸದ ಬಳಿಕ ಈ ಭವಿಷ್ಯ ನುಡಿಯಲಾಗಿದೆ.