ಗಂಗಾವತಿ: ಪಾನ್ ಶಾಪ್ ನಲ್ಲಿ ಗಂಗಾವತಿ ಕಲಾವಿದನ ಮೊಬೈಲ್ ಎಗರಿಸಿದ ಖದೀಮರು...!
ಗಂಗಾವತಿ ನಿವಾಸಿ ಕಲಾವಿದ ನಾಗರಾಜ್ ಇಂಗಳಗಿ ಅವರ ಮೊಬೈಲನ್ನ ಪಾನ್ ಶಾಪ್ ಬಳಿ ಕದೀಮರು ಎಗೆರಿಸಿರುವ ಘಟನೆಯೊಂದು ನಡೆದಿದೆ. ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಗಂಗಾವತಿಗೆ ಬರುತ್ತಿದ್ದ ವೇಳೆ ಮಾರ್ಗ ಮಧ್ಯ ತುಮಕೂರು ಜಿಲ್ಲೆಯ ಶಿರಾ ಬಳಿ ಊಟಕ್ಕೆಂದು ಬಸ್ ನಿಲ್ಲಿಸಿದ ವೇಳೆ ಹೋಟೆಲ್ನ ಬಳಿ ಇದ್ದ ಪಾನ್ ಶಾಪ್ ನಲ್ಲಿ ಖರೀದಿ ಮಾಡಿ ವಾಪಸ್ ತೆರಳುತ್ತಿದ್ದ ವೇಳೆ ಮೊಬೈಲ್ ಇಟ್ಟು ಮೈಮರೆತ ಕಾರಣ ಕಾದು ಕುಳಿತಿದ್ದ ಖದೀಮರೋ ಮೊಬೈಲನ್ನ ಎದುರಿಸಿದ್ದಾರೆ.