ಬೀಳಗಿ: ಆಯುಧ ವಿಚಾರಬಾಗಿ ರಾಜ್ಯಸಭಾ ಸದಸ್ಯ ಭಾಂಡಗೆ ಹೇಳಿಕೆ ವಿಚಾರ, ಚಿಕ್ಕಸಂಗಮದಲ್ಲಿ ಸಷಿವ ಹೆಚ್.ಕೆ.ಪಾಟೀಲ್ ತಿರುಗೇಟು
ತಮ್ಮ ಆತ್ಮರಕ್ಷಣೆ ಗಾಗಿ ಶಸ್ತ್ರ ಆಯುಧ ಇಟ್ಟುಕೊಳ್ಳಿ. ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಹೇಳಿಕೆಗೆ ಸಚಿವ ಎಚ್ ಕೆ ಪಾಟೀಲ್ ತಿರುಗೇಟು. ಚಿಕ್ಕಸಂಗಮ ಗ್ರಾಮದಲ್ಲಿ ಹೇಳಿಕೆ. ಆಯುಧಗಳು ಎಂದರೆ ಪಿಸ್ತೂಲು ಬಂದೂಕು ಚಾಕು ಅಂತ ತಿಳಿದುಕೊಂಡಿದ್ದಾರೆ ಅವರು. ನಾವೆಲ್ಲ ರೈತರು ಆಯುಧ ಪೂಜೆ ಅಂದ್ರೆ ಕುಂಟಿ ಪೂಜೆ ಮಾಡುತ್ತೇವೆ. ರಂಟಿ ಪೂಜೆ ಮಾಡುತ್ತೇವೆ. ಇಂಡಸ್ಟ್ರಿಯವರು ಲೇತ್ ಮಷೀನ್ ಗಳನ್ನು ಪೂಜೆ ಮಾಡುತ್ತಾರೆ. ಸುತ್ತಿಗೆಗಳನ್ನು ಪೂಜೆ ಮಾಡುತ್ತಾರೆ. ಅವರವರ ಕಸುಬು ಕುಲಕಸಬು ಏನಿದೆ. ಬದುಕಿಗೆ ಏನು ಉಪಯೋಗ ಮಾಡುತ್ತೇವೆ, ಬದುಕಿಗೆ ಅಸ್ತ್ರ. ಬದುಕಿನ ಅಸ್ತ್ರವನ್ನು ಪೂಜಿಸುವ ದಿವಸ ಇದು. ಅವರು ಯಾಕೆ ಹಾಗೆ ಹೇಳಿದರೊ ಗೊತ್ತಿಲ್ಲ ಎಂದರು