ಚಾಮರಾಜನಗರ: ಬಾಚನಹಳ್ಳಿಯಲ್ಲಿ ಬಸ್ ಗಳ ಅಪಘಾತ ಕೇಸ್: ಗಾಯಾಳುಗಳ ಆರೋಗ್ಯ ವಿಚಾರಿಸಿದ ಚಾಮರಾಜನಗರ ಡಿಸಿ
ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಗ್ರಾಮದ ಬಳಿ ಮಳವಳ್ಳಿ-ಕೊಳ್ಳೇಗಾಲ ಹೆದ್ದಾರಿಯಲ್ಲಿ ನಡೆದ ಮೂರು ಬಸ್ ಗಳ ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯವನ್ನು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ವಿಚಾರಿಸಿದರು. ಮಂಡ್ಯ ಜಿಲ್ಲಾಸ್ಪತ್ರೆಗೆ ಚಾಮರಾಜನಗರ ಡಿಸಿ ಶಿಲ್ಪಾನಾಗ್, ಕೊಳ್ಳೇಗಾಲ ತಹಸಿಲ್ದಾರ್ ಬಸವರಾಜ್ ಭಾನುವಾರ ಭೇಟಿ ನೀಡಿ, ಅಪಘಾತದಲ್ಲಿ ಗಾಯಗೊಂಡ ಚಾಮರಾಜನಗರ ಜಿಲ್ಲೆಯವರ ಮಾಹಿತಿ ಪಡೆದರು. ಮೂರು ಬಸ್ ಗಳಲ್ಲಿ ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಗೂ ಕೂಡ ಇದ್ದು ಅಪಘಾತದಲ್ಲಿ ಗಾಯಗೊಂಡ ಕೆಲವರು ಕೊಳ್ಳೇಗಾಲ, ಚಾಮರಾಜನಗರ ಆಸ್ಪತ್ರೆಗೂ ದಾಖಲಾಗಿದ್ದಾರೆ. ಇನ್ನಷ್ಟೆ ಗಾಯಗೊಂಡವರ ಸಂಪೂರ್ಣ ವಿವರ ಹೊರಬೀಳಬೇಕಿದೆ.