ಬೆಳ್ತಂಗಡಿ: ಧರ್ಮಸ್ಥಳ ಕೇಸ್: ಬೆಳ್ತಂಗಡಿಯಲ್ಲಿ ಎಸ್ ಐಟಿ ಕಚೇರಿಗೆ ಮುಖ್ಯಸ್ಥ ಪ್ರಣವ್ ಮೊಹಂತಿ ಆಗಮನ; ಸಭೆ
ಎಸ್.ಐ.ಟಿ ಮುಖ್ಯಸ್ಥ ಪ್ರವವ್ ಮೊಹಂತಿ ಸೆ.14 ರಂದು ಬೆಳಗ್ಗೆ 11:40 ಕ್ಕೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ. ಜೊತೆಯಲ್ಲಿ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ, ಎಸ್.ಪಿ ಸನ್ ಕೂಡ ಆಗಮಿಸಿದ್ದಾರೆ. ಬೆಳ್ತಂಗಡಿ ಎಸ್.ಐ.ಟಿ ಕಚೇರಿಯಲ್ಲಿ ಪ್ರಣವ್ ಮೊಹಂತಿ ಅವರು ಅಧಿಕಾರಿಗಳೊಂದಿಗೆ ಮಹತ್ವದ ಸಭೆಗಳನ್ನು ನಡೆಸಲಿರುವುದಾಗಿ ತಿಳಿದು ಬಂದಿದೆ. ಸಾಕ್ಷಿ ದೂರುದಾರ ತಂದಿದ್ದ ತಲೆಬುರುಡೆಯ ವಿಚಾರದಲ್ಲಿ ತನಿಖೆ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಈಗಾಗಲೆ ಕಳೆದ ಎರಡು ವಾರಗಳಿಂದ ಈ ಬಗ್ಗೆಯೇ ತನಿಖೆ ನಡೆಯುತ್ತಿತ್ತು. ತನಿಖೆ ಬಳಿಕವಿಠಲ ಗೌಡ ಅವರೊಂದಿಗೆ ಸ್ಥಳತನಿಖೆಯನ್ನು ನಡೆಸಲಾಗಿದ್ದು ಪ್ರದೀಪ್ ನ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸುವ ಕಾರ್ಯ ಮಾಡಿದೆ.