ಮಾರ್ಕೆಟ್ನಿಂದ ರಾಜಗೋಪಲನಗರ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಇವಿ ಬಸ್ ಅನ್ನು ಓವರ್ ಟೇಕ್ ಮಾಡುವ ವಿಚಾರಕ್ಕೆ ಬಸ್ ಚಾಲಕ ಹಾಗೂ ಆಟೋ ಚಾಲಕನ ನಡುವೆ ಕಿರಿಕ್ ನಡೆದಿದೆ. ಆಟೋ ಚಾಲಕ ಬಸ್ ಅನ್ನು ಅಡ್ಡಗಟ್ಟಿ ಗಲಾಟೆ ಮಾಡಿದ್ದಾನೆ. ನಂತರ ಬಸ್ನಿಂದ ಇಳಿದು ಚಾಲಕನೂ ಪ್ರತಿಕ್ರಿಯಿಸಿದ್ದಾನೆ. ಇಬ್ಬರ ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.