ಬೀದರ್: ನಗರದ ಚಿದ್ರಿ ರಸ್ತೆಯಲ್ಲಿ ಪೊಲೀಸ್ ದಾಳಿ; ಅಕ್ರಮವಾಗಿ ಸಾಗಿಸುತಿದ್ದ 62 ಲಕ್ಷ ರೂ. ಮೌಲ್ಯದ ಸಿಗರೆಟು ತಂಬಾಕು ಸೇರಿ ಇತರ ವಸ್ತುಗಳ ಜಪ್ತಿ
Bidar, Bidar | Nov 9, 2025 *“ ಬೀದರ ಜಿಲ್ಲೆಯ ಗಾಂಧಿಗಂಜ ಪೊಲೀಸರಿಂದ 62 ಲಕ್ಷಕ್ಕೂ ಅಧಿಕ ಮೌಲ್ಯದ ಸುಗಂಧಿತ ನಕಲಿ ತಂಬಾಕು ಪದಾರ್ಥ ವಶ, ಒಂದು ವಾಹನ ಜಪ್ತಿ ಆರೋಪಿರ ಬಂಧನ”* ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗ ದರ್ಶನದಂತೆ, ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಚಿದ್ರಿ ರೋಡಿನ ಚಿದ್ರಿ ರೋಡಿನ ಮಜ್ಜಿದ ಫುಟಪಾತ್ ಮೇಲೆ ಒಂದು ವಾಹನದಲ್ಲಿ ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೇ ಸಿಗರೇಟ್ ತಯ್ಯಾರಿಸುವ ಜರ್ದಾ, ಸಿಗರೇಟ್ ಫಿಲ್ಟರ್, ಪೇಪರ್ ರಿಮ್ ಸಾಗಾಟ ಮಾಡಲು ಒಂದು ವಾಹನದಲ್ಲಿ ಲೋಡ ಮಾಡುತ್ತಿದ್ದ ಮಾಹಿತಿಯಂತೆ, ಬೀದರ ಗಾಂಧಿಗಂಜ ಪೊಲೀಸ್ ಠಾಣೆಯ ಪಿ.ಐ. ಶ್ರೀ ಆನಂದರಾವ್ ಎಸ್.ಎನ್ ರವರು ತಮ್ಮ ಠಾಣೆಯ ಸಿಬ್ಬಂದಿರವರೊಂದಿಗೆ ದಾಳಿ