ಚಿಂತಾಮಣಿ: ನಂದಿಗಾನಹಳ್ಳಿ ಸಮೀಪ ಕೃಷಿಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಸಾವು
ಚಿಂತಾಮಣಿ ತಾಲೂಕಿನ ನಂದಿಗಾನಹಳ್ಳಿಯಲ್ಲಿ ರಂಜಿತ್ ಎಂಬ ವಿದ್ಯಾರ್ಥಿಯು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ನಾಲ್ಕು ಮಂದಿ ಬಾಲಕರು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೃಷಿಹೊಂಡಕ್ಕೆ ಬಿದ್ದಂತಹ ರಂಜಿತ್ ಮೇಲೆ ಬರಲಾಗದೆ ಸಾವನ್ನಪ್ಪಿದ್ದಾರೆ. ಈ ಕೃಷಿ ಹೊಂಡವು ಜೋಗ್ಯನಹಳ್ಳಿ ಗ್ರಾಮದ ರೈತನೊಬ್ಬನಿಗೆ ಸೇರಿದೆ ಎಂದು ತಿಳಿದು ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಬಿಇಒ ಉಮಾದೇವಿ ಮತ್ತಿತರರು ಭೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿದ್ದಾರೆ.