ಮೊಳಕಾಲ್ಮುರು:- ಸಂಕ್ರಾಂತಿ ಹಬ್ಬದ ಪ್ರಯುಕ್ತವಾಗಿ ತಾಲೂಕಿನ ಗುಂಡ್ಲುರು ಗ್ರಾಮದಲ್ಲಿ ಬೇಡ ಜಂಗಮ ಜನಾಂಗದವರಿಂದ ಬಿಕ್ಷಾಟನೆ ನಡೆಯಿತು. ಬೇಡ ಜಂಗಮ ಜನಾಂಗದ ಮೂಲವೃತ್ತಿ ಭಿಕ್ಷಾಟನೆ ಯಾಗಿದ್ದು ಇತ್ತೀಚಿನ ವರ್ಷಗಳಲ್ಲಿ ಇವರು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಂದುವರಿದ ಹಿನ್ನೆಲೆಯಲ್ಲಿ ಬಿಕ್ಷಟನೆಯಿಂದ ದೂರ ಉಳಿದಿದ್ದಾರೆ ಆದರೂ ತಮ್ಮ ಮೂಲ ವೃತ್ತಿಯನ್ನು ಪರಂಪರೆಯಂತೆ ನೆನಪಿಸುವ ಸಲುವಾಗಿ ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬಿಕ್ಷಾಟನೆ ಮಾಡುವ ಮೂಲಕ ತಮ್ಮ ವೃತ್ತಿ ಬಗೆಗಿನ ಗೌರವವನ್ನು ನೆನಪಿಸುತ್ತಾರೆ.