ಬಂಗಾರಪೇಟೆ: 4 ದಿನಗಳ ಹಿಂದೆ ಪ್ರತ್ಯಕ್ಷ ಗೊಂಡಿದ್ದ ಒಂಟಿ ಆನೆ ಇದೀಗ ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ
4 ದಿನಗಳ ಹಿಂದೆ ಪ್ರತ್ಯಕ್ಷ ಗೊಂಡಿದ್ದ ಒಂಟಿ ಆನೆ ಇದೀಗ ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ. ಬೂದಿಕೋಟೆ : ಒಂಟಿ ಆನೆಯನ್ನು ಸತತವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಾಚರಣೆ ನಡೆಸಿ ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಅಷ್ಟೇ ಕಾಮಸಮುದ್ರ ಹೋಬಳಿಯ ಗಡಿ ಗ್ರಾಮಗಳಲ್ಲಿ ಪ್ರತ್ಯಕ್ಷಗೊಂಡಿದ್ದ ಆನೆಯನ್ನು ಬಂಗಾರಪೇಟೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪಟಾಕಿಗಳನ್ನು ಸಿಡಿಸುವ ಮೂಲಕ ಆನೆಯನ್ನು ಬೂದಿಕೋಟೆ ಹೋಬಳಿಯ ದಿನ್ನೂರು ಹಾಗೂ ಮೂತನೂರು ಅರಣ್ಯ ಪ್ರದೇಶಕ್ಕೆ ಓಡಿಸಿದ್ದರು.