ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ರೈತ ಸಂಘದಿಂದ ಪುರಸಭೆ ಅಧಿಕಾರಿಗಳಿಗೆ ಮನವಿ ಬಂಗಾರಪೇಟೆ ನಗರದಾದ್ಯಂತ ಒತ್ತುವರಿಯಾಗಿರುವ ಸರ್ಕಾರಿ ಆಸ್ತಿಗಳನ್ನು ತೆರವುಗೊಳಿಸಿಲು ವಿಶೇಷ ತಂಡ ರಚನೆ ಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಸರ್ವೆ ನಂ. 138ರಲ್ಲಿ 2 ಎಕರೆ 2 ಗುಂಟೆ ಸರ್ಕಾರಿ ಜಮೀನಿಗೆ ಖಾತೆಗಳನ್ನು ಮಾಡಬಾರದೆಂದು ರೈತ ಸಂಘದಿಂದ ಪುರಸಭೆ ಅಧಿಕಾರಿಗಳಿಗೆ ಶನಿವಾರ ಮಧ್ಯಾನ ಮೂರು ಗಂಟೆಯಲ್ಲಿ ಮನವಿ ನೀಡಿ ಒತ್ತಾಯಿಸಲಾಯಿತು. ಪ್ರತಿ ವರ್ಷ ಮುಂಗಾರು ಮಳೆ ಪ್ರಾರಂಭವಾದಗ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ಹಾಗೂ ರಾಜಕಾಲುವೆಗಳು ಇಲ್ಲದೇ ಮಳೆ ನೀರು ಬಡವರ ಮನೆಗಳಿಗೆ ನುಗ್ಗಿ ಬಡವರ ಬದುಕನ್ನು ಬೀದಿಗೆ ತಳ್ಳುತ್ತಿದ್ದರ