ಕುರುಗೊಡು: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾಟರಿ ಕಳ್ಳತನ ಪ್ರಕರಣ, ನಾಲ್ವರ ಬಂಧನ
ಕುರುಗೋಡು ಹಾಗೂ ಸಿರಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಬ್ಯಾಟರಿ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ ನಾಲ್ವರು ಆರೋಪಿತರನ್ನು ಬಂಧಿಸಿದ್ದಾರೆ.ಠಾಣಾ ವ್ಯಾಪ್ತಿಯ ಗ್ರಾಮಗಳಿಂದ ಸರ್ಕಾರಿ ಶಾಲೆಗಳು ಹಾಗೂ ಟ್ರಾಕ್ಟರ್ಗಳ ಬ್ಯಾಟರಿಗಳು ಕಳ್ಳತನವಾಗಿದ್ದವು. ಈ ಸಂಬಂಧ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 26 ರಂದು ವಿಶೇಷ ತಂಡವು ನಾಲ್ವರು ಆರೋಪಿತರನ್ನು ಪತ್ತೆಮಾಡಿ ಬಂಧಿಸಿದ್ದು, ಕುರುಗೋಡು ಪೊಲೀಸ್ ಠಾಣೆಯ 3 ಹಾಗೂ ಸಿರಿಗೇರಿ ಠಾಣೆಯ 3 ಪ್ರಕರಣಗಳನ್ನು ಸೇರಿ ಒಟ್ಟು 6 ಕಳ್ಳತನ ಪ್ರಕರಣಗಳನ್ನು ಭೇದಿಸಿದೆ.ಪೊಲೀಸರು ಆರೋಪಿತರ ಬಳಿಯಿಂದ 27 ಬ್ಯಾಟರಿಗಳು, ಒಂದು ಅಪಿ ಆಟೋ, 2 ಮೋಟಾರ್ಸೈಕಲ್ಗಳು ಸೇರಿದಂತೆ ಒಟ್ಟು ಸುಮಾರು ರೂ.