ಬಂಗಾರಪೇಟೆ: ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟಕ್ಕೆ ಬಹುಮತ:ನಗರದಲ್ಲಿ
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್
ಇದೇ ತಿಂಗಳು 12ರಂದು ನಡೆಯಲಿರುವ ಟಿಎಪಿಸಿಎಂಎಸ್ ಚುನಾವಣೆಯನ್ನು ಎನ್‌ಡಿಎ ಮೈತ್ರಿ ಕೂಟ ಪ್ರತಿಷ್ಟೆಯಾಗಿ ಸ್ವೀಕರಿಸಿ ಚುನಾವಣೆ ಎದುರಿಸಲು ಸಿದ್ದವಾಗಿದ್ದು 12 ಸ್ಥಾನಗಳಲ್ಲಿ ಬಹುಮತದೊಂದಿಗೆ ಆಡಳಿತ ಮಂಡಳಿಯನ್ನು ಎನ್‌ಡಿಎ ಅಭ್ಯರ್ಥಗಳು ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭಾನುವಾರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಹೇಳಿದರು. ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಭಾನುವಾರ ಬಿ ವರ್ಗದ 8 ಅಭ್ಯರ್ಥಿಗಳು ಹಾಗೂ ಎ ವರ್ಗಕ್ಕೆ 1 ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮಾತನಾಡಿದ ಅವರು ಈ ಹಿಂದೆ ಟಿಎಪಿಸಿಎಂಎಸ್ ಆಡಳಿತ ಮಂಡಳಿ ನಮ್ಮ ವಶದಲ್ಲೆ ಇತ್ತು,2005ರಲ್ಲಿ ಆಡಳಿತ ಮಂಡಳಿ ದಿವಾಳಿಯಾಗಿದ್ದಾಗ ಅದಕ್ಕೆ ಮರು ಜೀವ ನೀಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ ಎಂದ್ರು