ಬೀದರ್: ಮುಂದಕನಳ್ಳಿಯಲ್ಲಿ ಭವಾನಿ ಮಾತೆ 4ನೇ ಜಾತ್ರೋತ್ಸವ
Bidar, Bidar | Nov 12, 2025 ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮುಂದಕ್ನಳ್ಳಿಯಲ್ಲಿ ಬುದುವಾರ ಮಧ್ಯಾಹ್ನ 1ಕ್ಕೆ ಭವಾನಿ ಮಾತೆಯ 4ನೇ ಜಾತ್ರಾ ಮಹೋತ್ಸವ ಅತ್ಯಂತ ಭಕ್ತಿಯಿಂದ ನೆರವೇರಿತು. ಕಾಶಿ ಪೀಠದ ಪೀಠಾಧೀಶ್ವರ ಡಾ. ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ನೌಬಾದ್ ಜ್ಞಾನಯೋಗಾಶ್ರಮದ ಪೂಜ್ಯ ಡಾ. ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರಮುಖರಾದ ಶಿವಯ್ಯ ಸ್ವಾಮಿಯ ಬಾಶೀನಾಥ್ ಅನಿಲ್ ಸೇರಿಕಾರ್ ಸಂತೋಷ್ ಬೋಕ್ರೆ, ಗಂಗಾಧರ ನಿಖಿಲ್ ಶಿವಕುಮಾರ್ ಬಾಲ್ಕೆ ಅಶೋಕ್ ಮೇತ್ರಿ ಮೊದಲಾದವರು ಹಾಜರಿದ್ದರು