ದಾಂಡೇಲಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಗರ ಸಭೆಯ ಹತ್ತಿರದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ, ತಹಶೀಲ್ದಾರ್ ಮನವೊಲಿಕೆಯಿಂದ ಅಂತ್ಯಗೊಂಡ ಹೋರಾಟ
ದಾಂಡೇಲಿ : ನಗರದ ವಿವಿಧ ಜಲ್ವಂತ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕರ್ನಾಟಕ ರಾಜ್ಯದ ವತಿಯಿಂದ ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಗರ ಸಭೆಯ ಮುಂಭಾಗದಲ್ಲಿ ಹಮ್ಮಿಕೊಂಡಿದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಮನವೊಲಿಕೆಯ ನಂತರ ಹಿಂಪಡೆದುಕೊಳ್ಳಲಾಯಿತು. ಧರಣಿ ನಿರತ ಮಾನವ ಹಕ್ಕುಗಳ ನಿರ್ದೇಶಕ ಫೀರೋಜ್ ಪಿರ್ಜಾದೆ ಮಾತನಾಡಿ ಅನಧಿಕೃತ ಕಟ್ಟಡಗಳ ಕುರಿತು ಕಳೆದ 6 ತಿಂಗಳಿಂದ ಗಮನಕ್ಕೆ ತಂದರೂ ಸಹ ನಗರಸಭೆ ಮಾಹಿತಿ ಕೊಡಲು ವಿಫಲವಾಗಿದೆ. ಆದ್ದರಿಂದ ಹೋರಾಟವನ್ನು ಕೈಗೊಳ್ಳಲಾಗಿತ್ತು.