ಹಾವೇರಿ: ಹಾವೇರಿ ಕಾ ರಾಜಾ ಗಣಪತಿಗೆ ನಗರದಲ್ಲಿ 150 ಕೆಜಿ ಹಣ್ಣಿನ ಬೃಹದಾಕಾರದ ಹಾರ ಹಾಕಿ ಬೃಹತ್ ಶೋಭಾಯಾತ್ರೆ; ಸಹಸ್ರಾರು ಸಂಖ್ಯೆಯ ಭಕ್ತರು ಭಾಗಿ
Haveri, Haveri | Sep 16, 2025 ನಗರದ ಸುಭಾಷ್ ಸರ್ಕಲ್‌ನಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಹಾವೇರಿ ಕಾ ರಾಜಾ ಮಹಾ ಗಣಪತಿಯ ಬೃಹತ್ ಶೋಭಾಯಾತ್ರೆ ಮಂಗಳವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ನಗರದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರ ಮಧ್ಯೆ' ಅತೀ ವಿಜೃಂಭಣೆಯಿಂದ ನಡೆಯಿತು.ಗಣೇಶ ಚತುರ್ಥಿ ಅಂಗವಾಗಿ ಹಾವೇರಿ ಕಾ ರಾಜಾ ಗಜಾನನ ಉತ್ಸವ ಸಮಿತಿ ವತಿಯಿಂದ ನಗರದ ಸುಭಾಷ ಸ ರ್ಕಲ್‌ನಲ್ಲಿ ಸುಮಾರು 14 ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿಷ್ಠಾ ಪನೆ ಬಳಿಕ ಅಸಂಖ್ಯಾತ ಭಕ್ತರು ಪ್ರತಿದಿನ ಸುಭಾಷ ಸರ್ಕಲ್ ಗೆ ಭೇಟಿ ನೀಡಿ ಗಣೇಶ ಮೂರ್ತಿಯನ್ನು ವೀಕ್ಷಣೆ ಮಾಡುತ್ತಿದ್ದರು. ಕಳೆದ ಹದಿನೈದು ದಿನಗಳಿಂದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಾವೇರಿ ಕಾ ರಾಜಾ ಗಣೇಶನಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದವು