ಸಂಡೂರು: ತಾಲೂಕಿನ ರಣಜಿತ್ಪುರ ಗ್ರಾಮದ ಬಳಿಯ ಕಾರ್ಖಾನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ; ಕಾರ್ಮಿಕಗೆ ಗಾಯ
Sandur, Ballari | Oct 29, 2025 ತಾಲೂಕಿನ ರಣಜಿತ್ಪುರ ಗ್ರಾಮದ ಬಳಿಯ ಆರ್ ಐಪಿಎಲ್ ಸ್ಪಾಂಜ್ ಐರನ್ ಕಾರ್ಖಾನೆಯಲ್ಲಿ ಮಂಗಳವಾರ ಮಧ್ಯಾಹ್ನ 1ಗಂಟೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ. ಕಾರ್ಖಾನೆಯಲ್ಲಿನ ಕನ್ವೆಯರ್ಬೆಲ್ಟ್ ಹಾಗೂ ಕೆಲ ಯಂತ್ರಗಳಿಗೆ ಹಾನಿಯಾಗಿದೆ. ಸುದ್ದಿ ತಿಳಿದ ಕೂಡಲೇ ಸಂಡೂರಿನ ಅಗ್ನಿ ಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಗ್ನಿಯನ್ನು ನಂದಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಅಗ್ನಿ ಅವಘಡದಿಂದಾಗಿ ಕಾರ್ಖಾನೆಯಲ್ಲಿ ಮೆಕಾನಿಕಲ್ ಹೆಲ್ಪರ್ಆಗಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ತಿಪ್ಪೇಸ್ವಾಮಿಗೆ ಗಾಯಗಳಾಗಿದ್ದು, ಇವರು ತೋರಣಗಲ್ಲಿನ ಜಿಂದಾಲ್ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.