మంత్రాలయం: ರಾಯಚೂರು : ದೊಡ್ಡ ಜವಾಬ್ದಾರಿ, ಐತಿಹಾಸಿಕ ತೀರ್ಮಾನಗಳನ್ನ ತೆಗೆದುಕೊಂಡಿದ್ದೇನೆ
ಮಂತ್ರಾಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದೇನೆ, ಡಿಸಿಎಂ ಆಗಿದ್ದೇನೆ, ದೊಡ್ಡ ದೊಡ್ಡ ಪೋಸ್ಟ್ ಳ ಅಧಿಕಾರ ತೆಗೆದುಕೊಂಡಿದ್ದೇನೆ. ರಾಜ್ಯದಲ್ಲಿ ಇತಿಹಾಸ ಬರೆಯುತ್ತಿದ್ದೇನೆ. ರೈತರಿಗೆ ಯುಕೆಪಿಯಲ್ಲಿ ಹಣ ಕೊಡಲು ತೀರ್ಮಾನ ಮಾಡಿದ್ದೇನೆ. ಇದು ಸಣ್ಣ ತೀರ್ಮಾನ ಅಲ್ಲ ಐತಿಹಾಸಿಕ ತೀರ್ಮಾನ. ಮೇಕೆದಾಟು, ಮಹದಾಯಿ ಹೋರಾಟ ಮಾಡುತ್ತಿದ್ದೇವೆ. ಅದರೊಂದಿಗೆ ಬೆಂಗಳೂರು ಅಭಿವೃದಿಗೆ ಒಂದು ಲಕ್ಷ ಕೋಟಿ ಕೆಲಸಕ್ಕೆ ಏನು ವ್ಯವಸ್ಥೆ ಮಾಡಿದ್ದೇನೆ ಇವೆಲ್ಲ ಸುಲಭವಾಗಿ ಕೆಲಸ ಅಲ್ಲ, ಕಾಂಗ್ರೆಸ್ ಪಕ್ಷ ನಮಗೆ ಏನು ಮಾಡಬೇಕು ಅದನ್ನ ಮಾಡಿದೆ ನಿಮಗೇನು ಸಮಸ್ಯೆ ಎಂದು ಪ್ರಶ್ನಿಸಿದ್ದರು.