ನರಸಿಂಹರಾಜಪುರ: ಮಲೆನಾಡಲ್ಲಿ ಮತ್ತೆ ಮಳೆ ಆರಂಭ.! ಬಾಳೆಹೊನ್ನೂರಲ್ಲಿ ಮಳೆಯ ಸಿಂಚನ.!
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೆಲ ದಿನಗಳ ಬಿಡುವಿನ ನಂತರ ವರುಣ ಮತ್ತೆ ಎಂಟ್ರಿ ಕೊಟ್ಟಿದ್ದು ಮಲೆನಾಡಿಗರು ಫುಲ್ ಖುಷಿಯಾಗಿದ್ದಾರೆ. ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ಮಂಗಳವಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಮಳೆಯಾಗಿದ್ದು ಮಲೆನಾಡಿಗರ ಮುಖದಲ್ಲಿ ಮಂದಹಾಸವನ್ನ ತರಿಸಿದೆ.