ಬೆಂಗಳೂರು ಉತ್ತರ: ಸನ್ ಆಫ್ ಮುತ್ತಣ್ಣ ಸಿನಿಮಾ ನೋಡಿ, ಮಗನ ನಟನೆಗೆ ಕಣ್ಣೀರಿಟ್ಟ ನಟ ದೇವರಾಜ್ ದಂಪತಿ
ಸ್ಯಾಂಡಲ್ವುಡ್ ಹಿರಿಯ ನಟ ದೇವರಾಜ್ ದಂಪತಿ, ಸೋಮವಾರ ಪ್ರಣಂ ದೇವರಾಜ್ ನಟನೆಯ ಸನ್ ಆಫ್ ಮುತ್ತಣ್ಣ ಸಿನಿಮಾ ವೀಕ್ಷಿಸಿ, ಮಗನ ನಟನೆ ಕಂಡು ಕಣ್ಣೀರಿಟ್ಟರು. ಪುರಾತನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸನ್ ಆಫ್ ಮುತ್ತಣ್ಣ ಸಿನಿಮಾ ನಿರ್ಮಾಣವಾಗಿದ್ದು, ಶ್ರೀಕಾಂತ್ ಹುಣಸೂರು ನಿರ್ದೇಶನ ಮಾಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನೀಡಿರುವ ಈ ಸಿನಿಮಾ ಶುಕ್ರವಾರ ಚಿತ್ರಮಂದಿರಗಳಲ್ಲಿ ತೆರೆಕಂಡು ಮೆಚ್ಚುಗೆ ಪಡೆದಿದೆ. ಇದೀಗ ಇದೇ ಚಿತ್ರವನ್ನು ದೇವರಾಜ್ ದಂಪತಿ, ರಾಜಾಜಿನಗರದ ಒರಾಯನ್ ಮಾಲ್ನಲ್ಲಿ ವೀಕ್ಷಿಸಿದ್ದಾರೆ. ಸಿನಿಮಾ ಮುಗಿದ ಬಳಿಕ ಕಣ್ಣೀರಾಗಿದ್ದಾರೆ.