ಸಿರುಗುಪ್ಪ ತಾಲ್ಲೂಕಿನ ಹೊರವಲಯದಲ್ಲಿ ಸೋಮವಾರ, ತೆಕ್ಕಲಕೋಟೆ ಮಾರ್ಗದಿಂದ ಸಿರುಗುಪ್ಪಕ್ಕೆ ತೆರಳುತ್ತಿದ್ದ ಎತ್ತಿನ ಬಂಡಿಗೆ ಹಿಂಬದಿಯಿಂದ ಬಂದ ಪ್ರಯಾಣಿಕರಿದ್ದ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ, ಬಂಡಿಯಲ್ಲಿದ್ದ ಹಲವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಎತ್ತಿನ ಬಂಡಿಯ ನೊಗ ಮುರಿದು, ಬುತ್ತಿ ಚೆಲ್ಲಾಪಿಲ್ಲಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಳಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿರುಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.