ಕುಂದಗೋಳ ತಾಲೂಕಿನ ಗುಡಗೇರಿಯ ಮೈಲಾರಲಿಂಗೇಶ್ವರ ಸನ್ನಿಧಿಯಲ್ಲಿ ಕಾರ್ತಿಕ ಮಹೋತ್ಸವವನ್ನು ಬುಧವಾರ ರಾತ್ರಿ 8 ಗಂಟೆಗೆ ಅದ್ದೂರಿಯಾಗಿ ಆಚರಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಭಯ-ಭಕ್ತಿ ಭಾವದಿಂದ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ಸೇವಿಸಿದರು. ಸಾಲು ದೀಪಗಳು ಮತ್ತು ರಂಗೋಲಿಗಳ ನಡುವೆ ದೇವಸ್ಥಾನದ ಆವರಣ ಜ್ಯೋತಿಗಳಿಂದ ಕಂಗೊಳಿಸುತ್ತಿತ್ತು. ಭಯ ಭಕ್ತಿ ಭಾವದಿಂದ ಭಕ್ತರು ಭಕ್ತಿ ಸೇವೆ ಸಮರ್ಪಿಸಿದರು.