ಹುಬ್ಬಳ್ಳಿ ನಗರ: ನಗರದ ಬಮ್ಮಾಪುರ-ಬಣಗಾರ ಓಣಿಯಲ್ಲಿನ ದೇವಸ್ಥಾನದಲ್ಲಿ ನೂತನ ವಿದ್ಯುತ್ ಕಂಬ, ಧ್ವನಿವರ್ ಹಾಗೂ ಎಲ್.ಇ.ಡಿ ಬಲ್ಪಗಳ ಉದ್ಘಾಟನಾ ಸಮಾರಂಭ
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ 67 ರ ಬಮ್ಮಾಪುರ-ಬಣಗಾರ ಓಣಿಯಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮಹಾದ್ವಾರ ಹಾಗೂ ದೇವಸ್ಥಾನದ ಆವರಣದಲ್ಲಿ ನೂತನ ವಿದ್ಯುತ್ ಕಂಬ, ಧ್ವನಿವರ್ಧಕ ಹಾಗೂ ಎಲ್.ಇ.ಡಿ ಬಲ್ಬಗಳ ಉದ್ಘಾಟನಾ ಸಮಾರಂಭವನ್ನು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿಯವರು ನೆರವೇರಿಸಿದರು. ಮೂರುಸಾವಿರಮಠದ ಶ್ರೀ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀoದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿತು. ಈ ವೇಳೆ ಶಾಸಕರಾದ ಮಹೇಶ್ ಟೆಂಗಿನಕಾಯಿ, ಮಾಜಿ ಶಾಸಕರಾದ ಅಶೋಕ ಕಾಟವೆ, ಪಾಲಿಕೆಯ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ್ ಸೇರಿದಂತೆ ಉಪಸ್ಥಿತರಿದ್ದರು.