ಯಳಂದೂರು: ಕಾಂತಾರ ಸಿನಿ ಪ್ರದರ್ಶನದಲ್ಲಿ ಗೀತೆ ಕೇಳುತ್ತಿದ್ದಂತೆ ದೇವ ಬಂದಂತೆ ಆರ್ಭಟಿಸಿದ ಮಹಿಳೆ! ಯಳಂದೂರಿನಲ್ಲಿ ಘಟನೆ
ಯಳಂದೂರು ಪಟ್ಟಣದ ಚಿತ್ರಮಂದಿರದಲ್ಲಿ ಕಾಂತಾರ ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರಿಗೆ, ಸಿನಿಮಾದ ಪ್ರಸಿದ್ಧ ಹಾಡು "ಯಾವನೋ ಬೆಂಕಿನ ಕಟ್ಟಿ ಹಾಕುವನೋ.. ಎಂಬ ಹಾಡು ಬಂದ ತಕ್ಷಣವೇ ಮೈಮೇಲೆ ದೇವಭಾವನೆ ಬಂದಿದೆ ಎಂದು ಆರ್ಭಟಿಸಿದ ಘಟನೆ ಎಲ್ಲರ ಆಶ್ಚರ್ಯಕ್ಕೆ ಕಾರಣವಾಯಿತು. ದೈವ ಭಕ್ತಿಯಿಂದ ತುಂಬಿರುವ ಕಥಾವಸ್ತುವು ಹೊಂದಿರುವ ಈ ಸಿನಿಮಾದ ಕೆಲವು ದೃಶ್ಯಗಳು ಮತ್ತು ಹಾಡುಗಳು ಭಕ್ತರಲ್ಲಿ ಭಾವುಕತೆಯನ್ನು ಉಣಿಸಲು ಕಾರಣವಾಗುತ್ತಿವೆ. ಅದರಲ್ಲಿ ಈ ಹಾಡು ಕೇಳಿಬಂದಾಗ, ಮಹಿಳೆಯೊಬ್ಬರು ತಕ್ಷಣವೇ ದೇವಭಾವನೆಗೆ ಒಳಗಾಗಿ ವೇಗವಾಗಿ ಕುಣಿದು, ಆರ್ಭಟಿಸುವ ರೀತಿಯಲ್ಲಿ ವರ್ತಿಸಿದರು. ಈ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿದ್ದ ಇತರ ವೀಕ್ಷಕರು ಗಾಬರಿಗೊಂಡು ಶಾಂತಗೊಳಿಸಲು ಹರಸಾಹಸ ಪಟ್ಟರು