ಶುಕ್ರವಾರ, ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿ ಎಂಬಲ್ಲಿ ಆಂಧ್ರ ಮೂಲದ ಬಿಬಿಎಂ ವಿದ್ಯಾರ್ಥಿನಿ ದೇವಿಶ್ರೀ ಕೊಲೆ ಪ್ರಕರಣದ ಆರೋಪಿ, ಆಕೆಯ ಸ್ನೇಹಿತ ಪ್ರೇಮ್ ವರ್ಧನ್ನನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ, ಪ್ರೇಮ್ ವರ್ಧನ್ ತನ್ನ ಸ್ನೇಹಿತೆಯ ರೂಮಿಗೆ ತೆರಳಿದ್ದಾಗ ಯುವತಿಯನ್ನು ಕೊಲೆ ಮಾಡಿ, ಮೆಟ್ರೋ ಮೂಲಕ ಮೆಜೆಸ್ಟಿಕ್ ಬಂದು ತಿರುಪತಿಗೆ ಹೋಗಿದ್ದ. ಅಲ್ಲಿ ತಲೆಮರೆಸಿಕೊಳ್ಳಲು ಯತ್ನಿಸಿದ್ದ ಆತನನ್ನು ಪೊಲೀಸರು ಜಾಡು ಹಿಡಿದು ಬಂಧಿಸಿದ್ದಾರೆ.