ಎಪಿಎಂಸಿ ಪ್ರಾಂಗಣದಲ್ಲಿ ಅಕ್ರಮ ಮರಗಳ ಕಟಾವ್ ; ಕಾರ್ಯದರ್ಶಿ ಶ್ರೀನಿವಾಸ್ ವಿರುದ್ದ ಎಫ್ಐಆರ್ ಬಂಗಾರಪೇಟೆ ; ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳೆದಿರುವ ಮರಗಳ ಕೊಂಬೆಗಳನ್ನು ಅಕ್ರಮವಾಗಿ ಕಟಾವ್ ಮಾಡಿಸಿ ಕಾನೂನು ಉಲ್ಲಂಘನೆ ಮಾಡಿರುವ ಸಂಸ್ಥೆ ಕಾರ್ಯದರ್ಶಿ ಶ್ರೀನಿವಾಸ್ ಮತ್ತು ಮರಗಳ ಕಟಾವ್ ಮಾಡಿದ ವಟ್ರಕುಂಟೆ ಗ್ರಾಮದ ಮಿನಿ ಬಾಬು ವಿರುದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮೊಖದ್ದಮ್ಮೆ ದಾಖಲಿಸಿದ್ದಾರೆ. ಪ್ರಾಂಗಣದಲ್ಲಿ ಸಮೃದ್ದಿಯಾಗಿ ಬೆಳೆದಿದ್ದ ಬಾರೀ ಗಾತ್ರದ ಮರಗಳ ಕೊಂಬೆಗಳನ್ನು ಕಾರ್ಯದರ್ಶಿ ಸ್ಥಳದಲ್ಲಿ ಇದ್ದು ಕಟಾವ್ ಮಾಡಿಸಿ ಮೂರ್ನಾಲ್ಕು ಲೋಡ್ ಗಳಷ್ಟು ಟ್ರ್ಯಾಕ್ಟರ್ ನಲ್ಲಿ ತುಂಬಿಸಿ ಮರದ ತುಂಡುಗಳನ್ನು ಇಲಾಖೆ ಗಮನಕ್ಕೆ ತರದೆ ಸಾಗಿಸಿರುವ ಆರೋಪ ಕೇಳಿ ಬಂದಿತ್ತು.