ಚಿಟಗುಪ್ಪ: ಹುತಾತ್ಮರ ತ್ಯಾಗ ಬಲಿದಾನ ಸ್ಮರಣೀಯ: ಪಟ್ಟಣದಲ್ಲಿ ತಹಶೀಲ್ದಾರ್ ಮಂಜುನಾಥ್ ಪಂಚಾಳ
ಕಲ್ಯಾಣ ಕರ್ನಾಟಕ ಮುಕ್ತಿ ಸಂಗ್ರಾಮಕ್ಕಾಗಿ ಹೋರಾಟ ನಡೆಸಿದ ಹುತಾತ್ಮರ ತ್ಯಾಗ ಬಲಿದಾನ ಸ್ಮರಣೀಯ ಎಂದು ತಹಶೀಲ್ದಾರ್ ಮಂಜುನಾಥ್ ಪಂಚಾಯತ್ ಅವರು ಅಭಿಪ್ರಾಯಪಟ್ಟರು. ಪಟ್ಟಣದ ತಹಶೀಲ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಬುಧವಾರ ಬೆಳಿಗ್ಗೆ 10ಕ್ಕೆ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ದಿನಾಚರಣೆಯಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪುರಸಭೆ ಅಧ್ಯಕ್ಷ ದಿಲೀಪ್ ಕುಮಾರ್ ಬಗ್ದಲ್ಕರ್, ಮುಖ್ಯ ಅಧಿಕಾರಿ ಹುಸಾಮದ್ದೀನ್ ಬಾಬಾ ಇದ್ದರು.