ತುಮಕೂರು: ನಗರದ ಸಿದ್ದಿವಿನಾಯಕ ಪೆಂಡಾಲ್ ನಲ್ಲಿ 75 ವರ್ಷ ತುಂಬಿದ ದಂಪತಿಗಳಿಗೆ ಅಭಿನಂದನೆ ಕಾರ್ಯಕ್ರಮ : ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ ಭಾಗಿ
ತುಮಕೂರಿನ ಸಿದ್ದಿ ವಿನಾಯಕ ಸಮುದಾಯ ಭವನದಲ್ಲಿ 49 ನೇ ವರ್ಷದ 28 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 75 ವರ್ಷದ ತುಂಬಿದ ಆದರ್ಶ ದಂಪತಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ ಭಾಗವವಹಿಸಿದ್ದರು. ಶ್ರೀ ಸಿದ್ದಿ ವಿನಾಯಕ ಸೇವಾ ಮಂಡಳಿ ವತಿಯಿಂದ ಈ ಸಮಾರಂಭ ಭಾನುವಾರ ರಾತ್ರಿ 8. 30 ರ ಸಮಯದಲ್ಲಿ ನಡೆಯಿತು. ಕಾರ್ಯಕ್ರಮವನ್ನ ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ ಅವರು ಉದ್ಘಾಟಿಸಿ ಮಾತನಾಡಿದರ. ಸಾಮಾಜಿಕ ಸೇವಕಿ ಕಲ್ಪನಾ ಹಾಲಪ್ಪ ಸಹ ಮಾತನಾಡಿ, ನನ್ನ ಹಾಗೂ ಮುರುಳೀಧರ್ ಹಾಲಪ್ಪ ಅವರು ಮದುವೆಯಾಗಿ 30 ವರ್ಷ ಪೂರೈಸಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು