ಯಾದಗಿರಿ: ಹುರಸಗುಂಡಿಗಿ ಗ್ರಾಮದ ನೆರೆ ಸಂತ್ರಸ್ತರು ಮನೆಗಳನ್ನು ನಿರ್ಮಿಸಿ ಕೊಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಾತ್ರಿ ಇಡೀ ಧರಣಿ
Yadgir, Yadgir | Oct 1, 2025 ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಹುರಸಗುಂಡಿಗಿ ಗ್ರಾಮದ ನೆರೆ ಸಂತ್ರಸ್ತರು ಮನೆಗಳನ್ನು ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಾತ್ರಿ ಇಡೀ ಧರಣಿಯನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮುಖಂಡ ಹನುಮೇಗೌಡ ಬೀರನಕಲ್ ಭಾಗವಹಿಸಿ ಪ್ರತಿ ವರ್ಷ ಮಳೆ ಬಂದಾಗ ಈ ಗ್ರಾಮದ ಜನರಿಗೆ ತೊಂದರೆ ತಪ್ಪಿದ್ದಲ್ಲ ಈ ಹಿಂದೆ ಇವರಿಗೆ ಮನೆಗಳನ್ನು ಘೋಷಣೆ ಮಾಡಿದೆ ಆದರೆ ಇದುವರೆಗೂ ನಿರ್ಮಿಸಿ ಕೊಟ್ಟಿಲ್ಲ ಈಗ ಸರಕಾರ ಇವರಿಗೆ ಶಾಶ್ವತ ಮನೆಗಳನ್ನು ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಬರುವವರೆಗೂ ಪ್ರತಿಭಟನೆ ನಿರಂತರವಾಗಿ ನಡೆಸುವುದಾಗಿ ತಿಳಿಸಿದ್ದಾರೆ.