ಚಾಮರಾಜನಗರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ತೋಟದ ಮನೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದೆ. ಹೆಬ್ಬಾವು ನೋಡಿದ ಮನೆಮಂದಿ ಭಯದಿಂದ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಉಗರ ಪ್ರೇಮಿ ಸ್ನೇಕ್ ಅಶೋಕ್ ಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ತಕ್ಷಣ ಆಗಮಿಸಿದ ಸ್ನೇಕ್ ಅಶೋಕ್ ಹೆಬ್ಬಾವನ್ನು ರಕ್ಷಣೆ ಮಾಡಿ ನಂತರ ಅರಣ್ಯ ಅಧಿಕಾರಗಳ ಸಮ್ಮುಖದಲ್ಲಿ ಬಿ.ಆರ್.ಟಿ ರಕ್ಷಣೆ ಪ್ರದೇಶಕ್ಕೆ ಬಿಡಲಾಯಿತು