ರಾಯಚೂರು: ನಗರದಲ್ಲಿ ತಾಮ್ರದ ವೈರ್ ಗಾಗಿ ನೆಲ ಅಗೆದು ರಾತ್ರೋ ರಾತ್ರಿ ಕಳುವು ಮಾಡಿರುವ ಶಂಕೆ
ರಾಯಚೂರು ನಗರದ ಅಂದ್ರೂನ್ ಕಿಲ್ಲಾ ಬಡಾವಣೆಯಲ್ಲಿರುವ ಬಿಎಸ್ ಎನ್ ಎಲ್ ಮುಖ್ಯ ಕಚೇರಿಯಿಂದ ದುಷ್ಕರ್ಮಿಗಳು ಗುರುವಾರ ತಡರಾತ್ರಿ 1 ಗಂಟೆಗೆ ನೆಲವನ್ನು ಅಗೆದು ಬಿಎಸ್ಎನ್ಎಲ್ ಸಂಪರ್ಕ ವೈರ್ ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಸುಮಾರು ಒಂದೂವರೆ ಕಿಮೀನಷ್ಟು ವೈರ್ ಕಳವು ಮಾಡಿದ್ದು, ಅಂದಾಜು 30 ಲಕ್ಷ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. ಇದು ಒಂದು ತಂಡದ ಕೃತ್ಯವಾಗಿದ್ದು, ಸುಮಾರು 30 ಜನ ಕೆಲಸ ಮಾಡಿರುವುದು ಬೆಳಕಿಗೆ ಬಂದಿದೆ. ಸದರ್ ಬಜಾರ್ ಠಾಣೆ ವ್ಯಪ್ತಿಯಲ್ಲಿ ಕೃತ್ಯ ನಡೆದಿದೆ.