ರಾಯಚೂರು: ಜಿಲ್ಲೆಗೆ ಆಗಮಿಸುತ್ತಿರುವ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ; ಮಹಿಳೆಯರ ಪ್ರಗತಿ ಪರಿಶೀಲನೆ
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಅವರು ಸೆ.17 ರಿಂದ 19 ರವರೆಗೆ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಸೆಪ್ಟೆಂಬರ್ 17ರ ಬುಧವಾರ ರಾಯಚೂರಿನಲ್ಲಿ, ಸೆ.18ರಂದು ಸಿಂಧನೂರು ಹಾಗೂ ಸೆಪ್ಟೆಂಬರ್ 19 ರಂದು ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ರವರೆಗೆ ಮಹಿಳೆಯರ ಪ್ರಗತಿ ಪರಿಶೀಲನೆ ಹಾಗೂ ಮಹಿಳಾ ಸ್ಪಂದನೆ ಕಾರ್ಯಕ್ರಮ ಜರುಗಲಿದ್ದು, ಅದರಲ್ಲಿ ಮಹಿಳೆಯರ ರಕ್ಷಣೆ, ಭದ್ರತೆ, ಮೂಲಭೂತ ಸೌಕರ್ಯ ಹಾಗೂ ಸರ್ಕಾರದ ಯೋಜನೆಗಳನ್ನು ಮಹಿಳೆಯರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಅವಶ್ಯಕತೆಯಿದ್ದಲ್ಲಿ ಮಹಿಳೆಯರು ಭಾಗವಹಿಸಬೇಕು ಎಂ