ಹಾವೇರಿ: ತಿಮ್ಮೇನಹಳ್ಳಿ ಕ್ರಾಸ್ ನಲ್ಲಿ ಎರಡು ಟಿಪ್ಪರ್ ಲಾರಿಗಳು ಮುಖಾಮುಖಿ ಡಿಕ್ಕಿ; ಓರ್ವ ಕ್ಲೀನರ್ ಗೆ ಗಂಭೀರ ಗಾಯ
Haveri, Haveri | Sep 15, 2025 ಎರಡು ಟಿಪ್ಪರ್ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಎರಡೂ ಲಾರಿಗಳ ಮುಂದಿನ ಶೋ ಜಖಂಗೊಂಡಿದ್ದಲ್ಲದೇ ಒರ್ವ ಲಾರಿಯ ಕ್ಲೀನರ್ ಗಾಯಗೊಂಡಿರುವ ಘಟನೆ ತಾಲೂಕಿನ ತಿಮ್ಮೇನಹಳ್ಳಿ ಕ್ರಾಸ್‌ನಲ್ಲಿ ನಡೆದಿದೆ. ಸವಣೂರು ತಾಲೂಕು ಸಿದ್ದಾಪೂರ ಗ್ರಾಮದ ಮಾದೇವಪ್ಪ ಬಾಲಪ್ಪ ಆಕಾರಿ ಎಂಬುವವರ ವಿರುದ್ಧ ದೂರು ಬೆಳಗಾವಿ ಮೂಲದ ಮ್ಯಾನೇಜರ್ ರಾಹುಲ್ ಪಾಟೀಲ ಪೊಲೀಸರಿಗೆ ದೂರು ನೀಡಿದ್ದಾರೆ. ಫಿರ್ಯಾದಿಗೆ ಸಂಬಂಧಿಸಿದ ಟಿಪ್ಪರ್ ಲಾರಿ ಚಾಲಕ ಯಲ್ಲಪ್ಪ ಕರೆಣ್ಣನವರ ತನ್ನ ಪಾಡಿಗೆ ತಾನು ರಸ್ತೆಯ ಎಡಬದಿಯಲ್ಲಿ ಬೆಳಗಾವಿ ಕಡೆಗೆ ಹೋಗುತ್ತಿದಾಗ ಅದೇ ಮಾರ್ಗದಲ್ಲಿ ಹಾವೇರಿ ಕಡೆಯಿಂದ ಬಂದ ಆರೋಪಿ ಟಿಪ್ಪರ್ ಚಾಲಕ ಡಿಕ್ಕಿ ಹೊಡೆದು ಅವಘಾತ ಪಡಿಸಿದ್ದಾನೆ. ಘಟನೆಯಲ್ಲಿ ಎರಡು ಲಾರಿಗಳ ಮುಂದಿನ ಶೋ ಜಖಂಗೊಂಡಿವೆ.