ನಾಗಮಂಗಲ: ಪಟ್ಟಣದಲ್ಲಿ ಅದ್ದೂರಿಯಾಗಿ ನಡೆದ 73 ನೇ ವರ್ಷದ ಕೋಟೆ ವಿದ್ಯಾಗಣತಿ ವಿಸರ್ಜನಾ ಮೆರವಣಿಗೆ
ನಾಗಮಂಗಲ ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ 73 ನೇ ವರ್ಷದ ಕೋಟೆ ವಿದ್ಯಾಗಣತಿ ವಿಸರ್ಜನಾ ಮೆರವಣಿಗೆ ಶುಕ್ರವಾರ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು. ಕೋಟೆ ವಿದ್ಯಾಗಣತಿಯು ಬಿಟಿ ಬಡಾವಣೆ ವೃತ್ತವನ್ನು ತಲುಪಿ ನಂತರ ನಾಗಮಂಗಲದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಮೆರವಣಿಗೆ ಉದ್ದಕ್ಕೂ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಶೇಷ ಪೂಜೆಗಳೊಂದಿಗೆ ಕೋಟೆ ವಿದ್ಯಾ ಗಣಪತಿಯನ್ನು ಮೆರವಣಿಗೆಯಲ್ಲಿ ಕೊಂಡೋಯ್ಯಲಾಯಿತು. ಡಿಜೆ ಸೌಡ್ಸ್ ನೃತ್ಯಗಳು, ವಿವಿಧ ಗೊಂಬೆ ನೃತ್ಯಗಳು, ವೀರಗಾಸೆ ಕುಣಿತ, ತಮಟೆ ವಾದ್ಯಗಳು, ಹಾರನಹಳ್ಳಿ ವಾದ್ಯ ಹಾಗೂ ವಿವಿಧ ನೃತ್ಯಗಳು ಸಾವಿರಾರು ಭಕ್ತಾಧಿಗಳಿಗೆ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಯುವಕರು, ಯುವತಿಯರು ಬೇರೆ ಬೇರೆ ಗ್ರಾಮಗಳಿಂದ ಬಂದಂತಹ ಭಕ್ತಾಧಿಗಳು ಸಂಭ್ರಮದಿಂದ ಶ್ರೀಕೋಟೆ ವಿದ್ಯ