ಕಲಬುರಗಿ: 'ಲಿಂಗಾಯತ ಶಾಸಕರ ಮಾತಿಗೆ ಬೆಲೆ ಕೊಡದ ಸರ್ಕಾರ,' ನಗರದಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಕಿಡಿ
ಕಲಬುರಗಿ : ಕಾಂಗ್ರೆಸ್ ಸರ್ಕಾರ ಲಿಂಗಾಯತ ಶಾಸಕರ ಬೇಡಿಕೆ ಮತ್ತು ಮಾತಿಗೆ ಕಿಮ್ಮತ್ತು ಕೊಟ್ತಿಲ್ಲವೆಂದು ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿದ್ದಾರೆ.. ಜೂ7 ರಂದು ಬೆಳಗ್ಗೆ 11.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾಂತರಾಜು ವರದಿ ಸರಿಯಿಲ್ಲ..ಮರು ಸರ್ವೆ ಮಾಡುವಂತೆ ಬಹಳಷ್ಟು ಒತ್ತಾಯ ಕೇಳಿಬಂದಿತ್ತು.. ಈ ಬಗ್ಗೆ ಲಿಂಗಾಯತ ಮತ್ತು ಒಕ್ಕಲಿಗ ಸಮಾಜದ ಶಾಸಕರು ಧ್ವನಿ ಎತ್ತಿದ್ದರು.. ಆದರೂ ಸರ್ಕಾರ ಶಾಸಕರ ಮಾತಿಗೆ ಬೆಲೆ ಕೊಡಲಿಲ್ಲ ಅಂತಾ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.. ಸಮಾಜಕ್ಕೆ ಆಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡುವತ್ತ ಶಾಸಕರು ಗಮನ ಹರಿಸಬೇಕು ಅಂತಾ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.