ಚಾಮರಾಜನಗರ: ಡಿವೈಎಸ್ಪಿಯಾಗಿ ಮುಂಬಡ್ತಿ ಹೊಂದಿದ ಯಳಂದೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶ್ರೀಕಾಂತ್
ಚಾಮರಾಜನಗರ ಜಿಲ್ಲೆಯ ಯಳಂದೂರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಆದ ಶ್ರೀ ಅವರಿಗೆ ಡಿವೈಎಸ್ಪಿ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇನ್ಸ್ ಪೆಕ್ಟರ್ ಶ್ರೀಕಾಂತ್ ಅವರು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ, ಮೈಸೂರಿನ ಉದಯಗಿರಿ, ಮಳವಳ್ಳಿ ಪೊಲೀಸ್ ಹಾಗೂ ಯಳಂದೂರು ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಶ್ರೀಕಾಂತ್ ಅವರನ್ನು ಇನ್ಸ್ ಪೆಕ್ಟರ್ ನಿಂದ ಡಿವೈಎಸ್ಪಿ ಯಾಗಿ ನೀಡಿದ ಸರ್ಕಾರ ಇನ್ನೂ ಸ್ಥಳವನ್ನು ಗುರುತಿಸಿಲ್ಲ