ಶಿವಮೊಗ್ಗ: ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆಗೆ ಚಾಲನೆ
ಶಿವಮೊಗ್ಗ ನಗರದ ಮಲ್ಲವಗೊಪ್ಪ ಡ್ರೈವಿಂಗ್ ಟ್ರ್ಯಾಕ್ ನಲ್ಲಿ ಸೋಮವಾರ ಶಿವಮೊಗ್ಗ ಜಿಲ್ಲಾಡಳಿತ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ನವೆಂಬರ್ ಮಾಹೆ 2025ರ ಅಂಗವಾಗಿ ಪೋಸ್ಟರ್ ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ವಾಯುಮಾಲಿನ್ಯದ ಕುರಿತಾಗಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಾರ್ವಜನಿಕರಿಗೆ ಐ.ಎ.ಎಸ್ ಅಧಿಕಾರಿ ನಾಗೇಂದ್ರಬಾಬು ಕುಮಾರ್ ಅವರು ಅರಿವು ಮೂಡಿಸಿದರು.