ದೇವದುರ್ಗ: ದೇವದುರ್ಗ : ಕಾಮಗಾರಿಯ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿ
ಎನ್.ಡಿ.ವಡ್ಡರ ಕಂಪನಿಗೆ ಸರ್ಕಾರ ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಹಾಗೂ ದುರಸ್ತಿ ಪ್ಯಾಕೇಜ್ ಒಂದು ಮತ್ತು ಎರಡನೇ ಗುತ್ತಿಗೆ ನೀಡಿ ಒಪ್ಪಂದ ಮಾಡಿಕೊಂಡಿದೆ. ಎನ್.ಡಿ.ವಡ್ಡರ ಕಂಪನಿಯೊಂದಿಗೆ ದೇವದುರ್ಗದ ತುಕರಾಮ ಜಿನ್ನಾಪುರ ಹೆಸರಿನಲ್ಲಿ ಉಪಗುತ್ತಿಗೆ ಪಡೆದು ಒಪ್ಪಂದಂತೆ 17ನೇ ವಿತರಣಾ ನಾಲೆ ಅಡಿಯಲ್ಲಿ ಒಟ್ಟು 13.5 ಕಿ.ಮೀ ಕಾಮಗಾರಿ ಮಾಡಲಾಗಿದ್ದು ಅದರ ಬಿಲ್ 4.87 ಕೋಟಿ ಆಗಿದೆ. ಆದರೆ ಆರು ತಿಂಗಳು ಕಳೆದ ನಂತರ ನಾನಾ ಸಬೂಬು ಹೇಳುತ್ತಿದ್ದಾರೆ, ಬಿಲ್ ಪಾವತಿ ಮಾಡುತ್ತಿಲ್ಲ ಎಂದು ಗುತ್ತಿಗೆದಾರರು ಅಸಮಾಧಾನ ಹೊರಹಾಕುತ್ತಿದ್ದಾರೆ.