ದೇವದುರ್ಗ: ಇರಬಗೇರಾದಲ್ಲಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನ; ಓರ್ವ ಯುವತಿ ಮೃತ
ತಾಲೂಕಿನ ಕೆ ಇರಬಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕ್ವಾರಿಯರದೊಡ್ಡಿ 3 ಜನ ಯುವತಿಯರು ಸೆ.14 ರ ಭಾನುವಾರ ಮಧ್ಯಾಹ್ನ ವಿಷ ಸೇವಿಸಿ ಜಮೀನಿನ ಬಾವಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ರೇಣುಕಮ್ಮ ಮಜ್ಜಿಗೆ (18) ಎಂಬ ಯುವತಿ ಮೃತ ಪಟ್ಟಿದ್ದಾಳೆ. ಇನ್ನಿಬ್ಬರಾದ ಸುನೀತಾ ಮಜ್ಜಿಗೆ ಮತ್ತು ಮುದುಕಮ್ಮ ಮಜ್ಜಿಗೆ ಅವರ ಸ್ಥಿತಿ ಗಂಭೀರವಾಗಿದೆ. ಇವರನ್ನು ದೇವದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ರಾಯಚೂರಿನ ರಿಮ್ಸ್ ಆಸ್ಪತ್ರೆ ಕರೆದೊಯ್ದಿದ್ದಾರೆ. ಆತ್ಮಹತೆಗೆ ನಿಖರ ಕಾರಣ ತಿಳಿದು ಬಂದಿಲ್ಲ. 3 ಜನ ಯುವತಿಯರು ರಕ್ತ ಸಂಭಂದಿಗಳಾಗಿದ್ದಾರೆ. ಸ್ಥಳಕ್ಕೆ ದೇವದುರ್ಗ ಪೋಲಿಸ್ ಠಾಣೆ ಪಿಐ ಮಂಜುನಾಥ ಎಸ್ ಭೇಟಿ ನೀಡಿ ಪ್ರಕರಣ ದಾಖಲೆಸಿಕೊಂಡಿದ್ದಾರೆ. ತನಿಖೆ ನಡೆಸಲಾಗುತ್ತಿದೆ.