ಕಲಬುರಗಿ : ಕುರಿ ಮರಿಗಳ ಗುಂಪಿನ ಮೇಲೆ ನಾಯಿಗಳು ಏಕಾಏಕಿ ದಾಳಿ ಮಾಡಿದ್ದು, ಈ ವೇಳೆ 16 ಕುರಿ ಮರಿಗಳು ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣ ಹೊರವಲಯದ ಯರಗಲ್ ಕ್ರಾಸ್ ಬಳಿ ನಡೆದಿದ್ದು, ಜ2 ರಂದು ರಾತ್ರಿ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಶೀವು ಮರೆಪ್ಪ ಎಂಬುವರಿಗೆ ಸೇರಿದ ಕುರಿಗಳ ಹಿಂಡಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ 16 ಕುರಿ ಮರಿಗಳನ್ನ ಬಲಿ ಪಡೆದಿದ್ದು, ಸ್ಥಳಕ್ಕೆ ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಇನ್ನೂ ಸೂಕ್ತ ಪರಿಹಾರ ನೀಡಬೇಕೆಂದು ಕುರಿಗಳ ಮಾಲೀಕ ಮನವಿ ಮಾಡಿದ್ದಾರೆ..