ಮಸ್ಕಿ: ಮಸ್ಕಿಯಲ್ಲಿ ಅದ್ಧೂರಿಯಾಗಿ ನಡೆದ ಯಮನೂರಪ್ಪನ 34ನೇ ವರ್ಷದ ಉರುಸು
Maski, Raichur | Mar 30, 2024 ಪಟ್ಟಣದ ವಾಲ್ಮೀಕಿ ನಗರದಲ್ಲಿರುವ ಯಮನೂರಪ್ಪನ ಗದ್ದಿಗೆಯಲ್ಲಿ 34ನೇ ವರ್ಷದ ಯಮನೂರಪ್ಪನ ಉರುಸು ಅದ್ಧೂರಿಯಾಗಿ ಜರುಗಿತು. ಬುಧವಾರ ಗಂಧ ನಡೆದಿದ್ದು, ಗುರುವಾರ, ಶುಕ್ರವಾರ ಉರುಸು ಹಾಗೂ ಶನಿವಾರ ಬೆಳಿಗ್ಗೆ ಯಮನೂರಪ್ಪನ ಉರುಸು ಜರುಗಿತು. ನೂರಾರು ಭಕ್ತರು ಭಾಗಿಯಾಗಿದ್ದು, ಪ್ರಸಾದ ಸ್ವೀಕರಿಸಿದರು. ಮಸ್ಕಿ ಪಟ್ಟಣದ ಸುತ್ತಮುತ್ತಲಿನ ಭಕ್ತರು ಭಾಗಿಯಾಗಿದ್ದರು.