ಶ್ರೀರಂಗಪಟ್ಟಣ: ಪಟ್ಟಣದ ಕಾವೇರಿ ನದಿ ತೀರದಲ್ಲಿ ಅಕ್ರಮ ನಿರ್ಮಿಸಿದ್ದ ರೆಸಾರ್ಟ್ ತೆರವು
ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಕ್ರಮ ನಿರ್ಮಿಸಿದ್ದ ರೆಸಾರ್ಟ್ ನನ್ನು ತೆರವು ನಡೆಸಿದ ಘಟನೆ ಜರುಗಿದೆ. ಕಾವೇರಿ ನದಿ ತೀರದ ಸೂಕ್ಷ್ಮ ವಲಯದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ರೆಸಾರ್ಟ್ ಅನ್ನು ತೆರವುಗೊಳಿಸಲಾಗಿದೆ. ರಂಗನತಿಟ್ಟು ಪಕ್ಷಿಧಾಮದ ಬಳಿ, ಬಂಗಾರದೊಡ್ಡಿ ನಾಲೆ ಸಮೀಪದಲ್ಲಿದ್ದ ಈ ರೆಸಾರ್ಟ್, ಸಿನಿಮಾ ನಟರು ಮತ್ತು ರಾಜಕಾರಣಿಗಳ ನೆಚ್ಚಿನ ತಾಣವಾಗಿತ್ತು. ಶ್ರೀರಂಗಪಟ್ಟಣ ತಾಲ್ಲೂಕು ಆಡಳಿತ ಮತ್ತು ಕಾವೇರಿ ನೀರಾವರಿ ನಿಗಮವು ಪೊಲೀಸ್ ಭದ್ರತೆಯೊಂದಿಗೆ ಜೆಸಿಬಿ ಬಳಸಿ ಈ ಕಾರ್ಯಾಚರಣೆ ನಡೆಸಿ ತೆರುವುಗೊಳಿಸಲು ಮುಂದಾಗಿದೆ . ಇದರಿಂದ ನದಿ ತೀರ ಒತ್ತುವರಿ ಮಾಡಿಕೊಂಡಿದ್ದ ಭೂಗಳ್ಳರಿಗೆ ದೊಡ್ಡ ಶಾಕ್ ನೀಡಿದಂತಾಗಿದೆ.