ವಿಜಯಪುರ: ಸಕಾಲಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಬೇಕು, ನಗರದಲ್ಲಿ ಗ್ರಾಮ ಪಂಚಾಯತಿ ಸದ್ಯಸರ ಒಕ್ಕೂಟ ಅಗ್ರಹ
ಗ್ರಾಮ ಪಂಚಾಯತಿ ಚುನಾವಣೆಗಳನ್ನು ಸಕಾಲದಲ್ಲಿ ನಡೆಸಲು ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟ ಬುದುವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಪತ್ರಿಕಾಗೋಷ್ಠಿ ಮೂಲಕ ಆಗ್ರಹಿಸಿದರು. ಸ್ಥಳೀಯ ಸ್ವಯಂ ಸರ್ಕಾರಗಳದ ಗ್ರಾಮ ಪಂಚಾಯತಿಗಳು ಪ್ರಜಾಪ್ರಭುತ್ವದ ತಾಯಿಬೇರುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಾಗೆ ಸಂವಿಧಾನಾತ್ಮಕ ಸರ್ಕಾರಗಳು. ಬರುವ ಫೆಬ್ರುವರಿ 2026ರಲ್ಲಿ ಗ್ರಾಮ ಪಂಚಾಯತಿಗಳ ಚುನಾವಣೆ ಆಗಬೇಕು, ಹೀಗಾಗಿ ಸರ್ಕಾರ ಸಕಾಲದಲ್ಲಿ ಚುನಾವಣೆ ನಡೆಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಅಗ್ರಹಿಸಿದರು.